top of page

ಸಂಸ್ಥೆಯ ಮೂಲ ಉದ್ದೇಶವೆಂದರೆ ಬಡ ಹಾಗೂ ಹಳ್ಳಿ ಜನರಿಗೆ ಉತ್ತಮ ಆರೋಗ್ಯ ಒದಗಿಸಿ ಜನರು ತಮ್ಮ ಜೀವನವನ್ನು ಉತ್ತಮವಾಗಿ ಹಾಗೂ ಆರೋಗ್ಯಕರವಾಗಿ ಜೀವಿಸುವಂತೆ ಮಾಡುವುದು.

ಸಂಜೀವಿನಿ ಟ್ರಸ್ಟ್

ಸಂಜೀವಿನಿ ಎಕೊಲಾಜಿಕಲ್ ಸರ್ವಿಸ್ ಅಂಡ್ ಎಜುಕೇಷನ್ ಟ್ರಸ್ಟ್ ನ್ನು 1998 ರಲ್ಲಿ ಜ್ಞಾನಮಿತ್ರ ಜೆಟ್ಟೆಪ್ಪ ರವರು ಪ್ರಾರಂಭಿಸಿದರು ಈ ಸಂಸ್ಥೆಯು ಕರ್ನಾಟಕ ಸರಕಾರ ನಿಯಮದ ಪ್ರಾಕಾರ ಲಾಭರಹಿತ ಸಂಸ್ಥೆಯಾಗಿ ನೊಂದಾಣೆಯಾಗಿದೆ. ಈ ಸಂಸ್ಥಯು ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಸಂಸ್ಥೆಯ ಅಂಬುಲೆನ್ಸ್ ನಿಂದ ಉತ್ತಮ ಆರೋಗ್ಯ ಒದಗಿಸುವ ಹಾಗೂ ಉತ್ತಮ ಜೀವನ ರೂಪಿಸಿ ಕೊಳ್ಳಲು ತನ್ನ ಸಂಸ್ಥೆಯ ಜೀವನ ಕೌಶಲ್ಯ ತರಬೇತಿ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಒಲಿಗೆ ತರಬೇತಿ ನೀಡುವುದರ ಮೂಲಕ ಉತ್ತಮ ಜೀವನ ರೋಪಿಸುವ ಉದ್ದೇಶದಿಂದ ಪ್ರಾರಂಭವಾಗಿದೆ.

Sanjeevini Trust Sirwar

ಜ್ಞಾನಮಿತ್ರ ಜೆಟ್ಟಪ್ಪ

ಜ್ಞಾನಮಿತ್ರ ಒಬ್ಬ ಹೊಲ ಇಲ್ಲದ ಹಾಗೂ ಬಡ ಕುಟುಂಬದಲ್ಲಿ ಸಿರವಾರ ಜಿಲ್ಲೆ ರಾಯಚೂರು ಕರ್ನಾಟಕದಲ್ಲಿ 1966ರಲ್ಲಿ ಜನಿಸಿದರು ಅವರು ಮನೆಯಿಂದ ಒಡಿಓಗಿ ಕೇವಲ 4ನೇತರಗತಿಯ ವರೆಗೆ ವಿಧ್ಯಬ್ಯಾಸ ಮಾಡಿದ್ದಾರೆ.

 

ಇವರು ಚಿಕ್ಕವಯಸ್ಸಿನಲ್ಲಿ ಪಟ್ಟಕಷ್ಟ ಇವರಿಗೆ ಬಡ ಹಾಗೂ ವಿಧ್ಯಬ್ಯಾಸ ಇಲ್ಲದವರ ಮೇಲೆ ಕರುಣೆ ಉಟ್ಟಿಸಿತು ಇವರಿಗೆ ವಿಧ್ಯಬ್ಯಾಸ ಕಡಿಮೆ ಇದ್ದರೂ ಸ್ವತಃ ಅವರೇ ಜೀವದಲ್ಲಿ ಕಲಿಯುತ್ತಿದ್ದಾರೆ. ಅವರು ಮತ್ರಿಗಳೊಂದಿಗೆ ಮತ್ತನ್ನಾಡುವಾಗ ಹಾಗೂ ಒಬ್ಬ ಕೂಲಿಕಾರ್ಮಿಕರೊಂದಿಗೆ ಮತ್ತನ್ನಾಡುವಾಗ ಒಂದೇ ರೀತಿ ಇರುತ್ತಾರೆ.

Gnanmithra received an appreciation letter rom Governor of Karnatak

ಕರ್ನಾಟಕ ರಾಜ್ಯಪಾಲರಿಂದ ಜ್ಞಾನಮಿತ್ರ ಪ್ರಶಂಸ ಪತ್ರ ಸ್ವೀಕರಿಸುತ್ತಿರುವುದು

Gnanmithr Helping Poor

ಅವರು ಯೋಜನೆಗಳ ಜನರಿಗೆ ಮುಟ್ಟಿಸುವವರಾಗಿ ಕೆಲಸಮಾಡುತ್ತಿದ್ದಾರೆ, ಇವರು ಬಡಜನರಿಗೆ ಇರುವ ಯೋಜನೆಗಳನ್ನು ಜನರಿಗೆ ಮುಟ್ಟಿಸವಲ್ಲಿ ಕೆಲಸಮಾಡುತ್ತಿದ್ದಾರೆ. ಇವರ ಬಡವರಿಗೆ ತೋರಿಸುವ ಸಹಾನುಭೂತಿ ಅಪಾರವಾದದ್ದು ಅವರು ರೋಗಿಗಳೊಂದಿ ಆಸ್ಪತ್ರೆಯಲ್ಲಿ ಅಗಲು ರಾತ್ರಿಗಳನ್ನು ಕಳೆದಿದ್ದಾರೆ ಇವರು ಜನರಿಗಿರುವ ಯೋಜನೆಯಡಿಯಲ್ಲಿ ಜನರಿಗೆ ಮುಟ್ಟಿಸಿ ಅವರಿಗೆ ಚಿಕಿತ್ಸೆ ಕೊಡಿಸುತ್ತಾರೆ ಜನರಿಗೆ ಯೋಜನೆಯ ಬಗ್ಗೆ ಅರಿವು ಇಲ್ಲದಿರಬಹುದು ಅಥವ ಅವರಿಗೆ ಆಸ್ಪತ್ರೆಯ ಭಯವಿರಬಹುದು ಇವರು ರೋಗಿಗಳ ಜೊತೆ ಇದ್ದು ಸಹಾಯ ಮಾಡಿ ಚಿಕಿತ್ಸೆ ಕೊಡಿಸುತ್ತಾರೆ.

ಪಬ್ಲಿಕ್ ಹಿರೋ

ಸಂಜೀವಿನಿ ಟ್ರಸ್ಟ್ ನ ಸ್ವಯಂ ಸೇವಕರು

ಸಂಜೀವಿನಿ ಟ್ರಸ್ಟ್ ತನ್ನ ಸ್ವಯಂ ಸೇವಕರಿಲ್ಲದೇ ಯಾವುದೇ ಕೆಲಸವನ್ನು ಮಾಡಲಾರದು ಟ್ರಸ್ಟ್ ನ ಸ್ವಯಂ ಸೇವಕರು ಟ್ರಸ್ಟ್ ನ ಕಾರ್ಯಗಳಾದ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರ, ಆರಿವು ಕಾರ್ಯಕ್ರಮ, ಸಾಮೂಹಿಕ ವಿವಾಹ ಹಾಗೂ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸುತ್ತಾರೆ ಸಂಜೀವಿನಿ ಟ್ರಸ್ಟ್ ನಿಂದ ಸಹಾಯ ಪಡೆದವರು ನಮ್ಮ ಸ್ವಯಂ ಸೇವಕರಿಗೆ ಒಂದು ನಮನ ಸಲ್ಲಿಸುತ್ತಾರೆ.

Sanjeevini Trust volunteers
bottom of page